13 April 2009

ಅಗ್ನಿಶಾಮಕ ಸೇವಾ ಸಪ್ತಾಹದ ಆಹ್ವಾನ

ಅಗ್ನಿಶಾಮಕ ಸೇವಾ ಸಪ್ತಾಹದ ಅಂಗವಾಗಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಆಶ್ರಯದಲ್ಲಿ ದಿನಾಂಕ ೧೪-೦೪-೨೦೦೯ ರಂದು ಮಂಗಳವಾರ ಬೆಳಿಗ್ಗೆ ೮.೩೦ ಗಂಟೆಗೆ ಬನ್ನೇರುಘಟ್ಟ ರಸ್ತೆಯಲ್ಲಿರುವ ಆರ್.ಎ.ಮುಂಡ್ಕುರ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಕಾಡಮಿಯ ಆವರಣದಲ್ಲಿ ನಡೆಯುವ ಸ್ಮರಣಾರ್ಥ ಕವಾಯತಿಗೆ ತಮ್ಮನ್ನು ಹಾರ್ದಿಕವಾಗಿ ಆಹ್ವಾನಿಸುತ್ತೆವೆ. ಮುಖ್ಯ ಅತಿಥಿಗಳಾಗಿ ಶ್ರೀ ಸುಧಾಕರ್ ರಾವ್, ಐ.ಎ.ಎಸ್., ಮುಖ್ಯ ಕಾರ್ಯದರ್ಶಿ, ಕರ್ನಾಟಕ ಸರ್ಕಾರರವರು ಭಾಗವಹಿಸುವರು. ಶ್ರೀ ಎ.ಕೆ.ಎಂ.ನಾಯಕ್, ಐ.ಎ.ಎಸ್., ಅಪರ ಮುಖ್ಯ ಕಾರ್ಯದರ್ಶಿ, ಒಳಾಡಳಿತ ಇಲಾಖೆ ಹಾಗೂ ಶ್ರೀ ಟಿ.ಸುನೀಲ್ ಕುಮಾರ್,ಐ.ಪಿ.ಎಸ್., ಸರ್ಕಾರದ ಕಾರ್ಯದರ್ಶಿ, ಒಳಾಡಳಿತ ಇಲಾಖೆ, ಬೆಂಗಳೂರು ವಿಶೇ಼ಷ ಅತಿಥಿಗಳಾಗಿ ಭಾಗವಹಿಸುವರು.