24 October 2008

ದೀಪಾವಳಿ ಹಬ್ಬದಲ್ಲಿ ಕೈ ಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ

ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ

ಪತ್ರಿಕಾ ಪ್ರಕಟಣೆ

೨೦೦೮ನೇ ಸಾಲಿನಲ್ಲಿ ದೀಪಾವಳಿ ಹಬ್ಬವನ್ನು ಸುರಕ್ಷಿತವಾಗಿ ಆಚರಿಸುವ ದಿಸೆಯಲ್ಲಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ ಈ ಕೆಳತೋರಿಸಿರುವ ಕ್ರಮ ಕೈಗೊಂಡಿದೆ.

ಜನಸಂದಣಿ ಹಾಗೂ ಇಕ್ಕಟ್ಟಾದ ಸ್ಥಳಗಳಲ್ಲಿ ಪಟಾಕಿ ದಾಸ್ತಾನು ಹಾಗೂ ಮಾರಾಟಕ್ಕೆ ನಿರಾಕ್ಷೇಪಣಾ ಪತ್ರ ನೀಡಬಾರದು ಹಾಗೂ ತೆರೆದ ಮೈದಾನಗಳಲ್ಲಿ ಮಾತ್ರ ಪಟಾಕಿ ದಾಸ್ತಾನು ಹಾಗೂ ಮಾರಾಟಕ್ಕೆ ನಿರಾಕ್ಷೇಪಣಾ ಪತ್ರವನ್ನು ಸಂಬಂಧಪಟ್ಟ ಪರವಾನಿಗೆ ಪ್ರಾಧಿಕಾರಕ್ಕೆ ನೀಡಬೇಕೆಂದು ದಿನಾಂಕ ೩೦-೦೯-೨೦೦೮ ರಂದು ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಎಲ್ಲಾ ವಾಹನಗಳನ್ನು ತಯಾರಿಯಲ್ಲಿಟ್ಟಿರಬೇಕು ಹಾಗೂ ಸಿಬ್ಬಂದಿಯವರುಗಳಿಗೆ ರಜೆ, ವಾರದ ಬಿಡುವು ಇತ್ಯಾದಿಗಳನ್ನು ನೀಡದೆ ಯಾವಾಗಲೂ ತಯಾರಿಯಲ್ಲಿಟ್ಟಿರಬೇಕು ಎಂದು ತಿಳಿಸಲಾಗಿದೆ.

ಇದಲ್ಲದೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಬಳಸುವಾಗ ಸಾರ್ವಜನಿಕರು ಈ ಕೆಳತೋರಿಸಿರುವ ಸುರಕ್ಷಿತ ಕ್ರಮಗಳನ್ನು ಪಾಲಿಸಲು ಮನವಿ ಮಾಡಲಾಗಿದೆ.

೧. ಮಕ್ಕಳಿಗೆ ದೊಡ್ಡವರ ಸಮ್ಮುಖದಲ್ಲೆ ಪಟಾಕಿ ಹಚ್ಚಲು ತಿಳಿಸತಕ್ಕದ್ದು.
೨. ತೆರೆದ ಪ್ರದೇಶದಲ್ಲಿ ಪಟಾಕಿ ಹಚ್ಚುವುದು ಸುರಕ್ಷಿತ. ಯಾವುದೇ ಸಂದರ್ಭದಲ್ಲಿ ಮನೆಯೊಳಗೆ ಪಟಾಕಿ ಹಚ್ಚಬಾರದು.
೩. ಆದಷ್ಟು ಮಟ್ಟಿಗೆ ಶರೀರಕ್ಕೆ ಹೊಂದಿಕೊಳ್ಳುವಂತಹ ಬಟ್ಟೆಗಳನ್ನು ಧರಿಸತಕ್ಕದ್ದು, ದೊಗಲೆ ಬಟ್ಟೆಗಳನ್ನು
ಧರಿಸಬಾರದು.
೪. ಸುರ ಸುರ ಬತ್ತಿ ಇತ್ಯಾದಿಗಳನ್ನು ಶರೀರದಿಂದ ಆದಷ್ಟು ದೂರ ಹಿಡಿಯಬೇಕು.
೫. ಪಟಾಕಿ ಹಚ್ಚುವಾಗ ಅದರ ಮೇಲೆ ಬಾಗಬಾರದು. ಸಾಧ್ಯವಾದಷ್ಟು ಮಟ್ಟಿಗೆ ಪಕ್ಕದಿಂದ ಹಚ್ಚತಕ್ಕದ್ದು.
೬. ಯಾವುದೇ ಪಾತ್ರೆ ಒಳಗೆ ಅಥವಾ ಇಕ್ಕಟ್ಟಾದ ಸ್ಥಳಗಳಲ್ಲಿ ಪಟಾಕಿ ಹಚ್ಚಬಾರದು.
೭. ಪಟಾಕಿಗಳನ್ನು ಜೇಬಿನಲ್ಲಿಡಬಾರದು.
೮. ಯಾವುದೇ ಸಂದರ್ಭದಲ್ಲಿ ಪಟಾಕಿಗಳನ್ನು ಬೆಂಕಿಯ ಅಥವಾ ಉಷ್ಣತೆ ಹೆಚ್ಚಿರುವ ಸ್ಥಳಗಳಲ್ಲಿ ಇಡಬಾರದು ಹಾಗೂ
ಪೊಟ್ಟಣಗಳನ್ನು ತೆರೆಯಬಾರದು.
೯. ಹಚ್ಚಿರುವ ಪಟಾಕಿ ಸಿಡಿಯದಿದ್ದರೆ ಅದನ್ನು ಪುನರ್ ಪರೀಕ್ಷಿಸಲು ಪ್ರಯತ್ನಿಸಬಾರದು.
೧೦. ಹೂ ಕುಂಡಗಳನ್ನು ಕೈಯಲ್ಲಿ ಹಿಡಿದುಕೊಂಡು ಹಚ್ಚಬಾರದು.
೧೧. ರಾಕೆಟ್ ಗಳನ್ನು ಬಳಸುವುದನ್ನು ಪೂರ್ಣವಾಗಿ ತಪ್ಪಿಸುವುದು ಉತ್ತಮ.
೧೨. ಬೇರೆಯವರಿಗೆ ತೋರಿಸಿಕೊಳ್ಳಲು ಪಟಾಕಿ ಹಚ್ಚುವಾಗ ಅಪಾಯಕ್ಕೆ ಅವಕಾಶ ಕೊಡಬಾರದು.
೧೩. ಪಟಾಕಿ ಹಚ್ಚುವಾಗ ಯಾವಾಗಲು ಪಕ್ಕದಲ್ಲಿ ನೀರನ್ನು ಇಟ್ಟುಕೊಳ್ಳುವುದು ಸುರಕ್ಷಿತ. ಆಕಸ್ಮಿಕವಾಗಿ
ಸುಟ್ಟಗಾಯಗಳಾದರೆ ಕೂಡಲೇ ತಣ್ಣೀರನ್ನು ಸುರಿಯತಕ್ಕದ್ದು.
೧೪. ಸಾಧ್ಯವಾದಷ್ಟು ಮಟ್ಟಿಗೆ ಸ್ನೇಹಿತರ ಜೊತೆ ಸೇರಿ ಸಾರ್ವಜನಿಕ ತೆರೆದ ಪ್ರದೇಶಗಳಲ್ಲಿ ಪಟಾಕಿ ಹಚ್ಚುವುದು ಸೂಕ್ತ.
ಇದರಿಂದ ಎಲ್ಲರೂ ಸಂತೋಷ ಪಡಬಹುದು.
೧೫. ಪಟಾಕಿ ಹಚ್ಚುವಾಗ ಮಕ್ಕಳು, ವಯಸ್ಸಾದವರು, ಖಾಯಿಲೆ ಇರುವವರು ಹಾಗೂ ಪ್ರಾಣಿಗಳನ್ನು ಗಮನಿಸಿ, ಅವರಿಗೆ
ಆಗುವ ತೊಂದರೆಗಳನ್ನು ತಪ್ಪಿಸಲು ಪ್ರಯತ್ನಿಸಿ.
ಸಾಧ್ಯವಾದಷ್ಟು ಮಟ್ಟಿಗೆ ಹೆಚ್ಚು ಶಬ್ದ ಬರುವ ಪಟಾಕಿಗಳನ್ನು ಆಸ್ಪತ್ರೆ ಮತ್ತು ಇತ್ಯಾದಿ ಸೂಕ್ಷ್ಮ ಪ್ರದೇಶಗಳಲ್ಲಿ ಬಳಸುವುದನ್ನು ತಪ್ಪಿಸಿ.

2 comments:

Manoj Patil said...

Good you shared this info. Reality photos of fire scene. Thnaks for sharing. Rds, Manoj from Kalyan City.

Satinder Bal said...

Please update your post's in other language also so that user from other state of India can also read your achievements .

Hope you work on this.

Regards

Stay connected with us for regular update on sarkari naukri